ರೂತಳು
11ನ್ಯಾಯಸ್ಥಾಪಕರು ಆಳುತ್ತಿದ್ದ ದಿನಗಳಲ್ಲಿ ಈಗ ಇದು ಸಂಭವಿಸಿತು, ಅದೇನಂದರೆ ದೇಶದಲ್ಲಿ ಬರ ಇತ್ತು. ಮತ್ತು ಯೆಹೂದದ ಬೇತ್ಲೆಹೇಮಿನ ಒಬ್ಬಾನೊಬ್ಬ ಮನುಷ್ಯನು ಮೋವಾಬಿನ ಸೀಮೆಗಳಲ್ಲಿ ವಾಸಿಸುವುದಕ್ಕೆ ಹೋದನು, ಅವನು ಮತ್ತು ಅವನ ಹೆಂಡತಿ ಮತ್ತು ಅವನ ಇಬ್ಬರು ಪುತ್ರರು. 2ಮತ್ತು ಆ ಮನುಷ್ಯನ ಹೆಸರು ಎಲೀಮೆಲೆಕನು ಎಂಬುದಾಗಿತ್ತು, ಮತ್ತು ಅವನ ಹೆಂಡತಿಯ ಹೆಸರು ನವೊಮಿ ಎಂಬುದಾಗಿತ್ತು, ಮತ್ತು ಅವನ ಇಬ್ಬರು ಪುತ್ರರ ಹೆಸರುಗಳು ಮಹ್ಲೋನ್ ಮತ್ತು ಕಿಲ್ಯೋನ್ ಎಂಬುದಾಗಿತ್ತು. ಅವರೆಲ್ಲರು ಯೆಹೂದದ ಬೇತ್ಲೆಹೇಮಿನ ಎಫ್ರಾತ್ಯರಾಗಿದ್ದರು. ಹಾಗೆ ಅವರು ಮೋವಾಬಿನ ಸೀಮೆಗಳಿಗೆ ಪ್ರಯಾಣ ಮಾಡಿದರು ಮತ್ತು ಅಲ್ಲಿ ವಾಸವಾಗಿದ್ದರು.
3ಅನಂತರ ನವೊಮಿಯ ಗಂಡನಾದ ಎಲೀಮೆಲೆಕನು ಸತ್ತುಹೋದನು. ಮತ್ತು ಆಕೆಯು ಉಳಿದಳು, ಆಕೆ ಮತ್ತು ಆಕೆಯ ಇಬ್ಬರು ಪುತ್ರರು. 4ಮತ್ತು ಅವರು ತಮಗೆ ಮೋವಾಬ್ ಸ್ತ್ರೀಯರನ್ನು ಹೆಂಡತಿಯರನ್ನಾಗಿ ತೆಗೆದುಕೊಂಡರು; ಮೊದಲ ಸ್ತ್ರೀಯ ಹೆಸರು ಒರ್ಫಾ ಎಂಬುದಾಗಿತ್ತು, ಮತ್ತು ಎರಡನೆಯ ಸ್ತ್ರೀಯ ಹೆಸರು ರೂತಳು ಎಂಬುದಾಗಿತ್ತು. ಮತ್ತು ಸುಮಾರು ಹತ್ತು ವರ್ಷಗಳು ಅವರು ಅಲ್ಲಿ ವಾಸವಾಗಿದ್ದರು. 5ಮತ್ತು ಅವರಿಬ್ಬರು, ಮಹ್ಲೋನ್ ಮತ್ತು ಕಿಲ್ಯೋನ್ ಸಹ ಸತ್ತುಹೋದರು, ಮತ್ತು ಆ ಸ್ತ್ರೀಯು ಆಕೆಯ ಇಬ್ಬರು ಮಕ್ಕಳು ಅಥವಾ ಆಕೆಯ ಗಂಡನು ಇಲ್ಲದೆ ಉಳಿದಳು.
6ಅನಂತರ ಆಕೆಯು ಮತ್ತು ಆಕೆಯ ಸೊಸೆಯರು ಮೋವಾಬಿನ ಸೀಮೆಗಳಿಂದ ಹಿಂದಿರುಗಲು ಎದ್ದಳು, ಏಕೆಂದರೆ ಯೆಹೋವನು ತನ್ನ ಜನರನ್ನು ಸಂದರ್ಶಿಸಿ ಅವರಿಗೆ ರೊಟ್ಟಿಯನ್ನು ಕೊಟ್ಟಿದ್ದಾನೆ ಎಂದು ಆಕೆಯು ಮೋವಾಬಿನ ಸೀಮೆಯಲ್ಲಿ ಕೇಳಿಸಿಕೊಂಡಿದ್ದಳು. 7ಆದ್ದರಿಂದ ಆಕೆಯು ಅವಳು ಎಲ್ಲಿ ವಾಸಿಸುತ್ತಿದ್ದಳೋ ಆ ಸ್ಥಳದಿಂದ ಹೊರಟುಹೋದಳು, ಮತ್ತು ಆಕೆಯ ಇಬ್ಬರು ಸೊಸೆಯರು ಆಕೆಯೊಂದಿಗೆ ಇದ್ದರು. ಮತ್ತು ಯೆಹೂದ ದೇಶಕ್ಕೆ ಹಿಂದಿರುಗಿ ಹೋಗುವುದಕ್ಕೆ ಅವರು ದಾರಿಯಲ್ಲಿ ಪ್ರಯಾಣ ಮಾಡಿದರು. 8ಆಗ ನವೊಮಿಯು ತನ್ನ ಇಬ್ಬರು ಸೊಸೆಯರಿಗೆ ಹೇಳಿದ್ದೇನಂದರೆ, “ಪ್ರತಿಯೊಬ್ಬ ಸ್ತ್ರೀಯು ಆಕೆಯ ತಾಯಿಯ ಮನೆಗೆ ತಿರುಗಿ ಹೋಗಿರಿ. ನೀವು ಮರಣಹೊಂದಿದವರ ಸಂಗಡ ಮತ್ತು ನನ್ನೊಂದಿಗೆ ಕಾರ್ಯಮಾಡಿದ ಹಾಗೆಯೇ ಯೆಹೋವನು ಒಡಂಬಡಿಕೆಯ ನಂಬಿಗಸ್ತಿಕೆಯಿಂದ ನಿಮ್ಮೊಂದಿಗೆ ಕಾರ್ಯಮಾಡಲಿ. 9ಪ್ರತಿಯೊಬ್ಬ ಸ್ತ್ರೀಯು ಆಕೆಯ ಗಂಡನ ಮನೆಯಲ್ಲಿ, ನೀವು ವಿಶ್ರಾಂತಿ ಹೊಂದಿಕೊಳ್ಳುವಂತೆ ಯೆಹೋವನು ನಿಮಗೆ ಅನುಗ್ರಹಿಸಲಿ.” ಆಮೇಲೆ ಅವರಿಗೆ ಮುದ್ದಿಟ್ಟಳು, ಮತ್ತು ಅವರು ತಮ್ಮ ಸ್ವರವನ್ನು ಎತ್ತಿದರು ಮತ್ತು ಅತ್ತರು. 10ಆದರೆ ಅವರು ಆಕೆಗೆ, “ಬದಲಾಗಿ, ನಾವೂ ನಿನ್ನ ಜೊತೆಯಲ್ಲೇ ನಿನ್ನ ಜನರ ಬಳಿಗೆ ಹಿಂದಿರುಗುವೆವು” ಅಂದರು. 11ಆದರೆ ನವೂಮಿ ಹೇಳಿದ್ದೇನಂದರೆ, “ನನ್ನ ಪುತ್ರಿಯರೇ ಹಿಂದಿರುಗಿರಿ! ನೀವು ನನ್ನೊಡನೆ ಹೋಗುವುದು ಏಕೆ? ಅವರು ನಿಮ್ಮಗಾಗಿ ಗಂಡಂದಿರು ಆಗುವಂತೆ ನಾನು ನನ್ನ ಗರ್ಭದಲ್ಲಿ ಇನ್ನೂ ಪುತ್ರರನ್ನು ಹೊಂದಿದ್ದೇನೆಯೇ? 12ನನ್ನ ಪುತ್ರಿಯರೇ ಹಿಂದಿರುಗಿ ಹೋಗಿರಿ! ಏಕೆಂದರೆ ನಾನು ಗಂಡನಿಗೆ ಸೇರಿದವಳಾಗಲು ತುಂಬಾ ವಯಸ್ಸಾದವಳಾಗಿದ್ದೇನೆ. ಒಂದು ವೇಳೆ ನನಗೆ ನಿರೀಕ್ಷೆ ಇದೆ ಎಂದು ನಾನು ಹೇಳಿದರೂ, ಮತ್ತು ಈ ರಾತ್ರಿಯಲ್ಲಿಯೇ ನಾನು ಗಂಡನಿಗೆ ಸೇರಿದವಳಾದರೂ ಸಹ ಮತ್ತು ಪುತ್ರರನ್ನು ಹೆತ್ತರೂ ಸಹ, 13ಆದ್ದರಿಂದ ಅವರು ದೊಡ್ಡವರು ಆಗುವ ಸಮಯದ ತನಕ ನೀವು ಕಾದಿರುವಿರೋ? ಈ ಕಾರಣಕ್ಕಾಗಿ ಗಂಡನಿಗೆ ಸೇರಿದವರು ಆಗದ್ದಿರುವುದರಿಂದ ನಿಮ್ಮನ್ನು ನೀವು ತಡೆದುಕೊಳ್ಳುವಿರೋ? ಇಲ್ಲ, ನನ್ನ ಪುತ್ರಿಯರೇ! ಏಕೆಂದರೆ ಅದು ನನಗೆ ತುಂಬಾ ಕಹಿಯಾಗಿದೆ, ನಿಮಗಿಂತ ಹೆಚ್ಚಾಗಿ, ಏಕೆಂದರೆ ಯೆಹೋವನ ಹಸ್ತವು ನನಗೆ ವಿರುದ್ಧವಾಗಿ ಹೊರಟಿದೆ.”
14ಆಗ ಅವರು ತಮ್ಮ ಸ್ವರವನ್ನು ಎತ್ತಿ ಮತ್ತು ಪುನಃ ಅತ್ತರು. ಅನಂತರ ಒರ್ಫಾ ತನ್ನ ಅತ್ತೆಗೆ ಮುತ್ತಿಟ್ಟಳು, ಆದರೆ ರೂತಳು ಆಕೆಗೆ ಅಂಟಿಕೊಂಡಿದ್ದಳು. 15ಆಗ ಆಕೆಯು, “ನೋಡು, ನಿನ್ನ ಓರಗಿತ್ತಿಯು ಆಕೆಯ ಜನರ ಕಡೆಗೆ ಮತ್ತು ಆಕೆಯ ದೇವರುಗಳ ಕಡೆಗೆ ತಿರುಗಿಕೊಂಡಳು. ನಿನ್ನ ಓರಗಿತ್ತಿಯ ಹಿಂದೆ ಹೋಗು” ಅಂದಳು. 16ಆದರೆ ರೂತಳು ಹೇಳಿದ್ದೇನಂದರೆ, “ನಿನ್ನನ್ನು ಬಿಟ್ಟುಬಿಡುವುದಕ್ಕಾಗಲಿ ಅಥವಾ ನಿನ್ನನ್ನು ಹಿಂಬಾಲಿಸುವುದರಿಂದ ಹಿಂದಿರುಗಿ ಹೋಗುವುದಕ್ಕಾಗಲಿ ನನ್ನನ್ನು ಒತ್ತಾಯಪಡಿಸ ಬೇಡ. ಏಕೆಂದರೆ ನೀನು ಹೋಗುವ ಸ್ಥಳಕ್ಕೆ ನಾನು ಬರುವೆನು, ಮತ್ತು ನೀನು ವಾಸಿಸುವ ಸ್ಥಳದಲ್ಲೇ ನಾನು ವಾಸಿಸುವೆನು. ನಿನ್ನ ಜನರೇ ನನ್ನ ಜನರು; ಮತ್ತು ನಿನ್ನ ದೇವರೇ ನನ್ನ ದೇವರು. 17ನೀನು ಸಾಯುವ ಸ್ಥಳದಲ್ಲೇ ನಾನು ಸಾಯುವೆನು, ಮತ್ತು ಅಲ್ಲೇ ನಾನು ಹೂಣಲ್ಪಡುವೆನು. ಮರಣವು ನನ್ನ ನಡುವೆ ಮತ್ತು ನಿನ್ನ ನಡುವೆ ಆಗಲಿಸಿದ್ದೆ ಆದ್ದಲ್ಲಿ, ಯೆಹೋವನು ನನಗೆ ಹಾಗೆ ಮಾಡಲಿ, ಮತ್ತು ಆತನು ಹಾಗೆ ಹೆಚ್ಚಿಸಲಿ.” 18ಆಗ ಆಕೆಯೊಂದಿಗೆ ಹೋಗುವುದಕ್ಕೆ ಅವಳು ನಿರ್ಧರಿಸಿದ್ದಾಳೆ ಎಂದು ಆಕೆಯು ಕಂಡು ಮತ್ತು ಅವಳೊಂದಿಗೆ ಮಾತನಾಡುವುದರಿಂದ ತಡೆದಿಟ್ಟುಕೊಂಡಳು. 19ಹಾಗೆ ಅವರಿಬ್ಬರೂ ಬೇತ್ಲೆಹೇಮಿಗೆ ಬರುವ ತನಕ ಪ್ರಯಾಣಮಾಡಿದರು. ಮತ್ತು ಅವರು ಬೇತ್ಲೆಹೇಮಿಗೆ ಬಂದ ತಕ್ಷಣವೇ ನಡೆದಿದ್ದೇನಂದರೆ, ಇಡೀ ಊರೇ ಅವರ ನಿಮಿತ್ತವಾಗಿ ತುಂಬಾ ಕೋಲಾಹಲಗೊಂಡಿತು. ಮತ್ತು ಸ್ತ್ರೀಯರು, “ಇದು ನವೊಮಿ ಅಲ್ಲವೇ?” ಅಂದರು. 20ಆದರೆ ಆಕೆಯು ಅವರಿಗೆ ಹೇಳಿದ್ದೇನಂದರೆ, “ನನ್ನನ್ನು ನವೊಮಿ ಎಂದು ಕರೆಯ ಬೇಡಿರಿ. ನನ್ನನ್ನು ಮಾರಾ ಎಂದು ಕರೆಯಿರಿ, ಏಕೆಂದರೆ ಸರ್ವಶಕ್ತನು ನನಗೆ ಬಹಳ ಕಹಿಯಾಗಿ ಕಾರ್ಯಮಾಡಿದ್ದಾನೆ. 21ನಾನೋ ಪೂರ್ತಿಯಾಗಿ ಹೋದೆನು, ಆದರೆ ಯೆಹೋವನು ನನ್ನನ್ನು ಬರಿದಾಗಿ ಹಿಂತಿರುಗಿ ಬರಮಾಡಿದ್ದಾನೆ. ನೀವು ನನ್ನನ್ನು ನವೊಮಿ ಎಂದು ಏಕೆ ಕರೆಯುತ್ತೀರಿ? ಆದರೆ ಯೆಹೋವನಾದರೋ, ನನಗೆ ವಿರೋಧವಾಗಿ ಆತನು ಸಾಕ್ಷಿ ನುಡಿದ್ದಾನೆ, ಮತ್ತು ಸರ್ವಶಕ್ತನು ನನಗೆ ಕೇಡನ್ನು ಮಾಡಿದ್ದಾನೆ.”
22ಹೀಗೆ ನವೊಮಿಯು ಮೋವಾಬ್ಯ ಸ್ತ್ರೀಯಾದ ಆಕೆಯ ಸೊಸೆಯಾದ ರೂತಳ ಜೊತೆಯಲ್ಲಿ ಹಿಂದಿರುಗಿದಳು, ಆಕೆಯೊಂದಿಗೆ, ಮೋವಾಬ್ಯ ಸೀಮೆಗಳಿಂದ ಹಿಂದಿರುಗಿದಂಥ ಸ್ತ್ರೀ. ಮತ್ತು ಜವೆಗೋದಿಯ ಸುಗ್ಗಿಯ ಪ್ರಾರಂಭದಲ್ಲಿ ಅವರು ಬೇತ್ಲೆಹೇಮಿಗೆ ಬಂದರು.
21ಈಗ ನವೊಮಿಗೆ ಆಕೆಯ ಗಂಡನ ಒಬ್ಬ ಸಂಬಂಧಿಕನಿದ್ದನು, ಎಲೀಮೆಲೆಕನ ಗೋತ್ರದ ಮಹಾ ಧನವಂತನಾದ ಮನುಷ್ಯನು. ಮತ್ತು ಅವನ ಹೆಸರು ಬೋವಜ ಎಂಬುದಾಗಿತ್ತು. 2ಮತ್ತು ಮೋವಾಬ್ಯ ಸ್ತ್ರೀಯಾದ ರೂತಳು ನವೊಮಿಗೆ, “ದಯಮಾಡಿ, ನಾನು ಹೊಲಕ್ಕೆ ಹೋಗಲು ಬಯಸುತ್ತೇನೆ ಮತ್ತು ನಾನು ಯಾವನ ಕಣ್ಣುಗಳಲ್ಲಿ ದಯೆ ಕಂಡುಕೊಳ್ಳುವೆನೋ ಅವನ ಹಿಂದೆ ಧಾನ್ಯದ ತೆನೆಗಳನ್ನು ಹಕ್ಕಲಾಯುವೆನು” ಅಂದಳು. ಮತ್ತು ಆಕೆಯು ಅವಳಿಗೆ, “ಹೋಗು ನನ್ನ ಮಗಳೆ” ಅಂದಳು. 3ಆದ್ದರಿಂದ ಆವಳು ಹೊರಟುಹೋದಳು ಮತ್ತು ಹೊಲದಲ್ಲಿ ಹಕ್ಕಲಾಯುವುದಕ್ಕೆ ಕೊಯ್ಯುವವರ ಹಿಂದಿನಿಂದ ಹೋದಳು. ಮತ್ತು ಆಕಸ್ಮಿಕವಾಗಿ, ಅವಳು ಬೋವಜನಿಗೆ ಸೇರಿದ ಹೊಲದ ಭಾಗಕ್ಕೆ ಬಂದಳು, ಅವನು ಎಲೀಮೆಲೆಕನ ಗೋತ್ರದವನು ಆಗಿದ್ದನು. 4ಆಗ ಇಗೋ, ಬೋವಜನು ಬೇತ್ಲೆಹೇಮಿನಿಂದ ಬಂದನು! ಮತ್ತು ಅವನು ಕೊಯ್ಯುವವರಿಗೆ, “ಯೆಹೋವನು ನಿಮ್ಮ ಸಂಗಡ ಇರಲಿ” ಅಂದನು. ಮತ್ತು ಅವರು ಅವನಿಗೆ, “ಯೆಹೋವನು ನಿನ್ನನ್ನು ಆಶೀರ್ವದಿಸಲಿ” ಅಂದರು.
5ಆಗ ಬೋವಜನು ಕೊಯ್ಯುವವರ ಮೇಲೆ ನೇಮಿಸಲ್ಪಟ್ಟಿದ್ದ ತನ್ನ ಸೇವಕನಿಗೆ, “ಈ ಹೆಣ್ಣು ಯಾರಿಗೆ ಸೇರಿದವಳು?” ಅಂದನು. 6ಆಗ ಕೊಯ್ಯುವವರ ಮೇಲೆ ನೇಮಿಸಲ್ಪಟ್ಟಿದ್ದ ಸೇವಕನು ಉತ್ತರಿಸಿ ಮತ್ತು ಹೇಳಿದ್ದೇನಂದರೆ, “ಈಕೆಯು ಮೋವಾಬ್ಯಳಾದ ಹೆಣ್ಣು, ನವೊಮಿಯ ಸಂಗಡ ಮೋವಾಬ್ ಸೀಮೆಯಿಂದ ಹಿಂದಿರುಗಿ ಬಂದಿರುವ ಹೆಣ್ಣು.” 7ಮತ್ತು ಅವಳು, ‘ದಯಮಾಡಿ, ಕೊಯ್ಯುವವರ ಹಿಂದಿನಿಂದ ಧಾನ್ಯದ ಸಿವುಡುಗಳ ಮಧ್ಯೆ ಹಕ್ಕಲಾಯ್ದಕೊಳ್ಳಲಿ ಮತ್ತು ಕೂಡಿಸಿಕೊಳ್ಳಲಿʼ ಅಂದಳು. ಮತ್ತು ಅವಳು ಬೆಳಗಿನ ಜಾವದಲ್ಲಿ ಬಂದಳು ಮತ್ತು ಆಗಿನಿಂದ ಈಗಿನ ವರೆಗೂ ಮುಂದುವರೆಸುತ್ತಿದ್ದಾಳೆ. ಇದು ಆಕೆಯು ಮನೆಯಲ್ಲಿ ಸ್ವಲ್ಪ ವಿಶ್ರಮಿಸಿಕೊಳ್ಳುತ್ತಿರುವುದು.”1 2.7 ಇದು ಆಕೆಯು...ಸ್ವಲ್ಪ ಎಂಬುದಕ್ಕೆ ಇಬ್ರಿಯ ಭಾಷೆಯಲ್ಲಿ ಸ್ಪಷ್ಟತೆಯಿಲ್ಲ.
8ಆಗ ಬೋವಜನು ರೂತಳಿಗೆ ಹೇಳಿದ್ದೇನಂದರೆ, “ನನ್ನ ಮಗಳೇ, ನೀನು ನನಗೆ ಕಿವಿಗೊಡುವುದು ಇಲ್ಲವೇ? ಬೇರೆ ಹೊಲದಲ್ಲಿ ಹಕ್ಕಲಾಯುವುದಕ್ಕೆ ಹೋಗ ಬೇಡ, ಮತ್ತು ಇಲ್ಲಿಂದ ಕೂಡ ಹೊರಟುಹೋಗಲೇ ಬೇಡ. ಆದರೆ ಹೀಗೆ ಮಾಡು: ನನ್ನ ಹೆಣ್ಣಾಳುಗಳಿಗೆ ನಿಕಟವಾಗಿ ಅಂಟಿಕೊಂಡಿರು. 9ಅವರು ಎಲ್ಲಿ ಕೊಯ್ಯುತ್ತಾರೋ ಆ ಹೊಲದ ಮೇಲೆ ನಿನ್ನ ಕಣ್ಣುಗಳನ್ನು ಇಡು ಮತ್ತು ಅವರ ಹಿಂದೆ ಹೋಗು. ನಿನ್ನನ್ನು ಮುಟ್ಟ ಕೂಡದು ಎಂದು ಯುವಕರಿಗೆ ನಾನು ಅಪ್ಪಣೆಕೊಟ್ಟಿದ್ದೇನೆ ಅಲ್ಲವೇ? ಮತ್ತು ನಿನಗೆ ಬಾಯಾರಿಕೆಯಾದಾಗ ನೀರಿನ ಪಾತ್ರೆಗಳ ಬಳಿಗೆ ಹೋಗು ಮತ್ತು ಯುವಕರು ಸೇದಿಟ್ಟಿರುವಂಥದ್ದರಿಂದ ಕುಡಿ.” 10ಆಗ ಆಕೆಯು ಅವಳ ಮುಖದ ಮೇಲೆ ಬಿದ್ದು ಮತ್ತು ನೆಲಕ್ಕೆ ಬಾಗಿದಳು ಮತ್ತು ಅವನಿಗೆ “ನಾನು ಪರದೇಶಿಯು ಆಗಿರುವುದ್ದರಿಂದ, ನೀನು ನನ್ನನ್ನು ಗಮನಿಸುವಂತೆ ನಾನು ನಿನ್ನ ಕಣ್ಣುಗಳಲ್ಲಿ ದಯೆ ಕಂಡುಕೊಂಡಿದ್ದು ಏಕೆ?” ಅಂದಳು. 11ಆಗ ಬೋವಜನು ಉತ್ತರಿಸಿ ಮತ್ತು ಆಕೆಗೆ ಹೇಳಿದ್ದೇನಂದರೆ, “ನಿನ್ನ ಗಂಡನ ಮರಣದ ನಂತರ ನಿನ್ನ ಅತ್ತೆಯ ಸಂಗಡ ನೀನು ಮಾಡಿದಂಥ ಎಲ್ಲವನ್ನು ಪೂರ್ತಿಯಾಗಿ ನನಗೆ ತಿಳಿಸಲ್ಪಟ್ಟಿದೆ. ನೀನು ನಿನ್ನ ತಂದೆ ಮತ್ತು ನಿನ್ನ ತಾಯಿ ಮತ್ತು ನಿನ್ನ ಜನ್ಮ ದೇಶವನ್ನು ಬಿಟ್ಟು, ಮತ್ತು ನಿನ್ನೆಗಿಂತ ಮುಂಚಿನ ದಿನದವರೆಗೂ ನಿನಗೆ ಗೊತ್ತೆ ಇಲ್ಲದಂಥ ಜನರ ಬಳಿಗೆ ನೀನು ಬಂದಿರುವಿ. 12ಯೆಹೋವನು ನಿನ್ನ ಕಾರ್ಯಕ್ಕೆ ಪ್ರತಿಫಲ ಕೊಡಲಿ, ಮತ್ತು ನೀನು ಆಶ್ರಯಕ್ಕಾಗಿ ಯಾವಾತನ ರೆಕ್ಕೆಯ ಕೆಳಗೆ ಬಂದಿರುವೆಯೋ ಆ ಇಸ್ರಾಯೇಲಿನ ದೇವರಾದ ಯೆಹೋವನಿಂದ ನಿನ್ನ ಪೂರ್ತಿ ಸಂಬಳವು ಬರಲಿ.” 13ಆಗ ಆಕೆಯು, “ನನ್ನ ಒಡೆಯನೇ, ನಿನ್ನ ಕಣ್ಣುಗಳಲ್ಲಿ ನಾನು ದಯೆ ಕಂಡುಕೊಳ್ಳಲಿ, ಏಕೆಂದರೆ ನೀನು ನನ್ನನ್ನು ಸಂತೈಸಿದಿ, ಮತ್ತು ಏಕೆಂದರೆ ನೀನು ನಿನ್ನ ದಾಸಿಯ ಹೃದಯಕ್ಕೆ ಮಾತನಾಡಿದಿ. ಆದರೆ ನಾನಾದರೋ ನಿನ್ನ ದಾಸಿಯರಲ್ಲಿ ನಾನು ಒಬ್ಬಳಂತೆಯೂ ಇಲ್ಲ” ಅಂದಳು. 14ಅನಂತರ ಊಟದ ವೇಳೆಯಲ್ಲಿ ಬೋವಜನು ಆಕೆಗೆ, “ಇಲ್ಲಿ ಬಾ, ಮತ್ತು ರೊಟ್ಟಿಯಿಂದ ತಿನ್ನು ಮತ್ತು ನಿನ್ನ ತುಂಡನ್ನು ಹುಳಿರಸದಲ್ಲಿ ಅದ್ದು” ಅಂದನು. ಆದ್ದರಿಂದ ಆಕೆಯು ಕೊಯ್ಯುವವರ ಬಳಿಯಲ್ಲಿ ಕುಳಿತುಕೊಂಡಳು, ಮತ್ತು ಅವನು ಆಕೆಗೆ ಹುರಿದ ಧಾನ್ಯವನ್ನು ಕೊಟ್ಟನು. ಮತ್ತು ಆಕೆಯು ತಿಂದಳು ಮತ್ತು ಆಕೆಯು ತೃಪ್ತಳಾದಳು, ಮತ್ತು ಆಕೆಯು ಕೆಲವನ್ನು ಉಳಿಸಿಟ್ಟುಕೊಂಡಳು. 15ಅನಂತರ ಆಕೆಯು ಹಕ್ಕಲಾಯುವುದಕ್ಕೆ ಎದ್ದಳು. ಆಗ ಬೋವಜನು ತನ್ನ ಯುವಕರಿಗೆ ಆಜ್ಞಾಪಿಸಿ ಹೇಳಿದ್ದೇನಂದರೆ, “ಈಕೆಯು ಸಿವುಡುಗಳ ಮಧ್ಯೆ ಕೂಡ ಹಕ್ಕಲಾಯ್ದುಕೊಳ್ಳಲಿ, ಮತ್ತು ಆಕೆಯನ್ನು ನಿಂದಿಸ ಬೇಡಿರಿ. 16ಆಕೆಗಾಗಿ ಸಿವುಡುಗಳಿಂದ ಕೂಡ ಕೆಲವನ್ನು ಕಿತ್ತು ಕೆಳಗೆ ಹಾಕಿರಿ ಮತ್ತು ಈಕೆಯು ಹಕ್ಕಲಾಯ್ದುಕೊಳ್ಳುವಂತೆ ಅದನ್ನು ಬಿಡಿರಿ, ಮತ್ತು ಆಕೆಯನ್ನು ಗದರಿಸ ಬೇಡಿರಿ!” 17ಆದ್ದರಿಂದ ಆಕೆಯು ಹೊಲದಲ್ಲಿ ಸಾಯಂಕಾಲದ ವರೆಗೂ ಹಕ್ಕಲಾಯ್ದುಕೊಂಡಳು. ಮತ್ತು ಆಕೆಯು ಹಕ್ಕಲಾಯ್ದುಕೊಂಡಂಥದ್ದನ್ನು ಆಕೆಯು ಬಡಿದಳು ಮತ್ತು ಅದು ಸುಮಾರು ಒಂದು ಏಫಾ ಜವೆಗೋದಿ ಆಗಿತ್ತು. 18ಮತ್ತು ಆಕೆಯು ಅದನ್ನು ಎತ್ತಿಕೊಂಡು ಮತ್ತು ಪಟ್ಟಣದೊಳಕ್ಕೆ ಹೋದಳು, ಮತ್ತು ಆಕೆ ಹಕ್ಕಲಾಯ್ದದ್ದನ್ನು ಆಕೆಯ ಅತ್ತೆ ನೋಡಿದಳು. ಆಗ ಆಕೆಯು ಸಂತೃಪ್ತಳಾದ ಮೇಲೆ ಆಕೆಯು ಯಾವುದನ್ನು ಉಳಿಸಿಟ್ಟಿದ್ದಳೋ ಅದನ್ನು ಆಕೆಯು ತೆಗೆದು ಅವಳಿಗೆ ಕೊಟ್ಟಳು. 19ಆಗ ಆಕೆಯ ಅತ್ತೆಯು ಆಕೆಗೆ, “ನೀನು ಈ ಹೊತ್ತು ಎಲ್ಲಿ ಹಕ್ಕಲಾಯ್ದಿ ಮತ್ತು ಎಲ್ಲಿ ಕೆಲಸಮಾಡಿದಿ? ನಿನ್ನನ್ನು ಗಮನಿಸಿದವನು ಆಶೀರ್ವದಿಸಲ್ಪಡಲಿ” ಅಂದಳು. ಆಗ ಆಕೆಯು ಆಕೆಯ ಆತ್ತೆಗೆ ಆಕೆಯು ಯಾರ ಜೊತೆ ಕೆಲಸ ಮಾಡಿದಳು ಎಂದು ಹೇಳಿದಳು. ಮತ್ತು ಆಕೆಯು, “ಈ ಹೊತ್ತು ನಾನು ಯಾರ ಜೊತೆ ಕೆಲಸ ಮಾಡಿದೆನೋ ಆ ಮನುಷ್ಯನ ಹೆಸರು ಬೋವಜ” ಅಂದಳು. 20ಆಗ ನವೊಮಿಯು ತನ್ನ ಸೊಸೆಗೆ, “ಜೀವಿಸುತ್ತಿರುವವರ ಸಂಗಡ ಮತ್ತು ಸತ್ತುಹೋದವರ ಇಬ್ಬರು ಸಂಗಡಲೂ ತನ್ನ ಒಡಂಬಡಿಕೆಯ ನಂಬಿಗಸ್ತಿಕೆಯನ್ನು ತೊರೆದುಬಿಡದಂಥ ಯೆಹೋವನಿಂದ ಅವನು ಆಶೀರ್ವದಿಸಲ್ಪಡಲಿ” ಅಂದಳು. ನವೊಮಿಯು ಆಕೆಗೆ, “ಆ ಮನುಷ್ಯನು ನಮಗೆ ತುಂಬಾ ಹತ್ತಿರದವನು. ಅವನು ನಮ್ಮ ಬಂಧುವಾಗಿರುವ ವಿಮೋಚಕರಲ್ಲಿ ಒಬ್ಬನು ಆಗಿದ್ದಾನೆ” ಎಂದು ಸಹ ಹೇಳಿದಳು. 21ಆಗ ಮೋವಾಬ್ಯ ಸ್ತ್ರೀಯಾದ ರೂತಳು, “ಅದರ ಜೊತೆಗೆ, ಅವನು ನನಗೆ ಹೇಳಿದ್ದೇನಂದರೆ, ‘ನನಗೆ ಸೇರಿದಂಥ ಎಲ್ಲಾ ಸುಗ್ಗಿಯನ್ನು ಅವರು ಮುಗಿಸುವ ಸಮಯವಾಗುವ ವರೆಗೂ ನನಗೆ ಸೇರಿದಂಥ ಆಳುಗಳ ಬಳಿ ಹತ್ತಿರದಲ್ಲೇ ನೀನು ಇರು’” ಅಂದಳು. 22ಆಗ ನವೊಮಿಯು ತನ್ನ ಸೊಸೆಯಾದ ರೂತಳಿಗೆ, “ನನ್ನ ಮಗಳೇ, ಇದು ಒಳ್ಳೆಯದಾಗಿದೆ, ಅದ್ದೇನಂದರೆ ನೀನು ಅವನ ಹೆಣ್ಣಾಳುಗಳ ಸಂಗಡಲೇ ಹೊರಟುಹೋಗುವುದು, ಆದ್ದರಿಂದ ಬೇರೆ ಯಾವ ಹೊಲದಲ್ಲಿಯೂ ಅವರು ನಿನಗೆ ತೊಂದರೆಮಾಡುವುದು ಇಲ್ಲ” ಅಂದಳು. 23ಆದ್ದರಿಂದ ಅವಳು ಜವೆಗೋದಿಯ ಸುಗ್ಗಿ ಮತ್ತು ಗೋದಿಯ ಸುಗ್ಗಿ ಮುಗಿಯುವ ತನಕ ಹಕ್ಕಲಾಯುವುದಕ್ಕೆ ಬೋವಜನ ಹೆಣ್ಣಾಳುಗಳ ಹತ್ತಿರದಲ್ಲೇ ಇದ್ದಳು. ಮತ್ತು ಆಕೆಯು ತನ್ನ ಆತ್ತೆಯ ಸಂಗಡ ವಾಸಿಸಿದಳು.
31ಅನಂತರ ಆಕೆಯ ಆತ್ತೆಯಾದ ನವೊಮಿಯು ಆಕೆಗೆ ಹೇಳಿದ್ದೇನಂದರೆ, “ನನ್ನ ಮಗಳೇ, ನಿನಗೋಸ್ಕರ ವಿಶ್ರಾಂತಿಯ ಸ್ಥಳವನ್ನು ನಾನು ಹುಡಕಬಾರದೋ, ಅದು ನಿನಗೆ ಒಳ್ಳೆಯದಾಗಿರುವುದು? 2ಆದ್ದರಿಂದ ಈಗ, ನೀನು ಯಾರ ಹೆಣ್ಣಾಳುಗಳ ಜೊತೆಯಲ್ಲಿ ಕೆಲಸ ಮಾಡುತ್ತಿರುವಿಯೋ ಆ ಬೋವಜನು ನಮ್ಮ ಸಂಬಂಧಿಕನು ಅಲ್ಲವೇ? ನೋಡು, ಅವನು ಈ ರಾತ್ರಿ ಕಣದಲ್ಲಿ ಜವೆಗೋದಿಯನ್ನು ತೂರುವನು. 3ಈಗ ನಿನ್ನನ್ನು ತೊಳೆದುಕೊಂಡು ಮತ್ತು ನಿನ್ನನ್ನು ಅಭಿಷೇಕಿಸಿಕೊಂಡು, ಮತ್ತು ನಿನ್ನ ವಸ್ತ್ರವನ್ನು ಮೇಲೆ ಹಾಕಿಕೊಂಡು ಮತ್ತು ಕಣಕ್ಕೆ ಹೋಗು. ಅವನು ತಿಂದು ಮತ್ತು ಕುಡಿಯುವುದನ್ನು ಮುಗಿಸುವ ತನಕ ಮನುಷ್ಯನಿಗೆ ನಿನ್ನನ್ನು ತಿಳಿಯಪಡಿಸಿಕೊಳ್ಳ ಬೇಡ. 4ಮತ್ತು ಅವನು ಮಲಗಿದಾಗ ಅದು ಆಗಲಿ, ಅವನು ಎಲ್ಲಿ ಮಲಗುತ್ತಾನೋ ಆ ನಿಖರವಾದ ಸ್ಥಳವು ನಿನಗೆ ಗೊತ್ತು. ಆಮೇಲೆ ಹೋಗು ಮತ್ತು ಅವನ ಪಾದಗಳನ್ನು ತೆರೆದುಬಿಡು ಮತ್ತು ಮಲಗು. ಅನಂತರ ಅವನು ತಾನೇ ನೀನು ಏನು ಮಾಡಬೇಕೆಂದು ನಿನಗೆ ಹೇಳುವನು.” 5ಮತ್ತು ಅವಳು ಆಕೆಗೆ, “ನೀನು ಹೇಳಿದಂಥ ಎಲ್ಲವನ್ನು ನಾನು ಮಾಡುವೆನು” ಅಂದಳು.
6ಆದ್ದರಿಂದ ಅವಳು ಕಣಕ್ಕೆ ಇಳಿದುಹೋದಳು ಮತ್ತು ಆಕೆಯ ಅತ್ತೆಯು ಅವಳಿಗೆ ಆಜ್ಞಾಪಿಸಿದ ಪ್ರಕಾರವೇ ಎಲ್ಲವನ್ನು ಮಾಡಿದಳು. 7ಮತ್ತು ಬೋವಜನು ತಿಂದನು ಮತ್ತು ಕುಡಿದನು, ಮತ್ತು ಅವನ ಹೃದಯವು ಚೆನ್ನಾಗಿತ್ತು, ಮತ್ತು ಧಾನ್ಯದ ರಾಶಿಯ ಕೊನೆಯಲ್ಲಿ ಮಲಗಲು ಹೋದನು. ಅನಂತರ ಅವಳು ರಹಸ್ಯವಾಗಿ ಬಂದಳು ಮತ್ತು ಅವನ ಪಾದಗಳನ್ನು ತೆರೆದುಬಿಟ್ಟಳು ಮತ್ತು ಮಲಗಿದಳು. 8ಅನಂತರ ಮಧ್ಯ ರಾತ್ರಿಯಲ್ಲಿ ಆದದ್ದೇನಂದರೆ ಮನುಷ್ಯನು ಬೆಚ್ಚಿಬಿದ್ದನು ಮತ್ತು ತಿರಿಗಿಕೊಂಡನು. ಮತ್ತು ಇಗೋ, ಅವನ ಪಾದಗಳ ಬಳಿಯಲ್ಲಿ ಹೆಂಗಸು ಮಲಗಿದ್ದಳು! 9ಮತ್ತು ಅವನು, “ನೀನು ಯಾರು?” ಅಂದನು. ಆಗ ಆಕೆಯು “ನಾನು ನಿನ್ನ ದಾಸಿಯಾದ ರೂತಳು. ಮತ್ತು ನಿನ್ನ ಹೊದಿಕೆಯ ಅಂಚನ್ನು ನಿನ್ನ ದಾಸಿಯಾದ ನನ್ನ ಮೇಲೆ ನೀನು ಹೊದಿಸು ಏಕೆಂದರೆ ನೀನು ಬಂಧುವಾಗಿರುವ ವಿಮೋಚಕನು ಆಗಿದ್ದೀಯಾ” ಅಂದಳು. 10ಆಗ ಅವನು ಹೇಳಿದ್ದೇನಂದರೆ, “ನನ್ನ ಮಗಳೇ, ಯೆಹೋವನಿಂದ ನೀನು ಆಶೀರ್ವದಿಸಲ್ಪಡು! ಅದಲ್ಲದೆ ಬಡವರಾದ ಅಥವಾ ಐಶ್ವರ್ಯವಂತರಾದ ಯೌವನಸ್ಥರ ಹಿಂದೆ ಹೋಗದಿರುವ ಮೂಲಕ, ನೀನು ನಿನ್ನ ಒಡಂಬಡಿಕೆಯ ನಂಬಿಗಸ್ತಿಕೆಯನ್ನು ಮೊದಲಿಗಿಂತ ಕೊನೆಯಲ್ಲಿ ಉತ್ತಮವಾಗಿಸಿದ್ದೀಯಾ. 11ಆದ್ದರಿಂದ ಈಗ, ನನ್ನ ಮಗಳೇ, ಭಯಪಡ ಬೇಡ! ನೀನು ಹೇಳಿದಂಥ ಎಲ್ಲವನ್ನು ನಾನು ನಿನಗಾಗಿ ಮಾಡುವೆನು; ಏಕೆಂದರೆ ನನ್ನ ಜನರ ಇಡೀ ಬಾಗಿಲು ನೀನು ಗುಣವಂತೆಯಾದ ಹೆಂಗಸು ಎಂದು ತಿಳಿದಿದೆ. 12ಮತ್ತು ಈಗ, ನಾನು ಬಂಧುವಾಗಿರುವ ವಿಮೋಚಕನು ಎಂಬುದು ಅದು ನಿಶ್ಚಯವಾಗಿಯೂ ನಿಜವೇ ಆಗಿದೆ, ಆದರೂ ನನಗಿಂತ ಸಮೀಪ ಬಂಧವಾಗಿರುವ ವಿಮೋಚಕನು ಇದ್ದಾನೆ. 13ಈ ರಾತ್ರಿ ಇಲ್ಲೇ ಇರು. ಮತ್ತು ಬೆಳಗ್ಗೆ ಆದಾಗ, ಅವನು ನಿನ್ನನ್ನು ವಿಮೋಚಿಸುವುದಾದರೆ, ಒಳ್ಳೆದು, ಅವನು ನಿನ್ನನ್ನು ವಿಮೋಚಿಸಲಿ. ಆದರೆ ಅವನು ನಿನ್ನನ್ನು ವಿಮೋಚಿಸಲು ಬಯಸದೆ ಹೋದರೆ, ಯೆಹೋವನು ಜೀವಿಸುವಂತೆಯೇ, ಆಗ ನಾನೇ ನಾನಾಗಿ ನಿನ್ನನ್ನು ವಿಮೋಚಿಸುವೆನು. ಬೆಳಗಿನ ತನಕ ಮಲಗಿಕೋ.” 14ಆದ್ದರಿಂದ ಆಕೆಯು ಬೆಳಗಿನ ತನಕ ಅವನ ಪಾದಗಳ ಬಳಿಯಲ್ಲೇ ಮಲಗಿಕೊಂಡಳು, ಆದರೆ ಅವಳು ಮನುಷ್ಯನು ತನ್ನ ಸ್ನೇಹಿತನನ್ನು ಗುರುತಿಸುವುದಕ್ಕಿಂತ ಮೊದಲೇ ಎದ್ದಳು. ಮತ್ತು ಅವನು, “ಹೆಂಗಸು ಕಣಕ್ಕೆ ಬಂದಿದ್ದಳು ಎಂಬುದು ಯಾರಿಗೂ ಗೊತ್ತಾಗ ಬಾರದು” ಎಂದು ಹೇಳಿದ್ದನು. 15ಆಗ ಅವನು, “ನಿನ್ನ ಮೇಲೆ ಇರುವಂಥ ಹೊದಿಕೆಯನ್ನು ತೆಗೆದುಕೊಂಡು ಬಾ ಮತ್ತು ಅದನ್ನು ಹಿಡಿ” ಅಂದನು. ಆದ್ದರಿಂದ ಆಕೆ ಅದನ್ನು ಹಿಡಿದಳು. ಮತ್ತು ಅವನು ಆರು ಪಡಿ ಜವೆಗೋದಿಯನ್ನು ಅಳತೆಮಾಡಿದನು ಮತ್ತು ಅದನ್ನು ಆಕೆಯ ಮೇಲೆ ಹೊರಿಸಿದನು. ಅನಂತರ ಅವನು ಪಟ್ಟಣದೊಳಕ್ಕೆ ಹೋದನು. 16ಅನಂತರ ಆಕೆಯು ತನ್ನ ಅತ್ತೆಯ ಬಳಿಗೆ ಬಂದಳು, ಮತ್ತು ಅವಳು, “ನನ್ನ ಮಗಳೇ, ನೀನು ಯಾರು?” ಅಂದಳು. ಆಗ ಆಕೆಯು ಮನುಷ್ಯನು ತನಗಾಗಿ ಮಾಡಿದಂಥ ಎಲ್ಲವನ್ನು ಅವಳಿಗೆ ಹೇಳಿದಳು. 17ಮತ್ತು ಆಕೆಯು, “ಅವನು ನನಗೆ ಈ ಆರು ಪಡಿ ಜವೆಗೋದಿಯನ್ನು ಕೊಟ್ಟನು, ಏಕೆಂದರೆ ‘ನೀನು ಬರಿದಾಗಿ ನಿನ್ನ ಅತ್ತೆಯ ಬಳಿಗೆ ಹೋಗಬಾರದು’ ಎಂದು ಅವನು ಹೇಳಿದನು” ಅಂದಳು. 18ಆಗ ಅವಳು, “ನನ್ನ ಮಗಳೇ, ವಿಷಯವು ಹೇಗೆ ಬೀಳುತ್ತದೆ ಎಂದು ನಿನಗೆ ತಿಳಿಯುವ ಸಮಯವಾಗುವ ತನಕ ಕುಳಿತುಕೊ. ಏಕೆಂದರೆ ಅವನು ಇವತ್ತು ಈ ವಿಷಯವನ್ನು ಮುಗಿಸದ ಹೊರತು ಮನುಷ್ಯನು ವಿಶ್ರಮಿಸುವುದೇ ಇಲ್ಲ” ಅಂದಳು.
41ಈಗ ಬೋವಜನು ಬಾಗಿಲಿನ ಬಳಿಗೆ ಹೋದನು ಮತ್ತು ಅಲ್ಲಿ ಕುಳಿತುಕೊಂಡನು. ಮತ್ತು ಇಗೋ, ಬೋವಜನು ಮುಂಚೆ ಯಾರ ಬಗ್ಗೆ ಹೇಳಿದ್ದನ್ನೋ ಅದೇ ಮನುಷ್ಯನು, ಬಂಧುವಾಗಿರುವ ವಿಮೋಚಕನು ಹಾದುಹೋಗುತ್ತಿದ್ದನು. ಮತ್ತು ಅವನು, “ಒಬ್ಬಾನೊಬ್ಬನೇ, ಇತ್ತ ತಿರಿಗಿಕೋ ಮತ್ತು ಇಲ್ಲಿ ಕುಳಿತುಕೋ” ಅಂದನು. ಅವನು ಅತ್ತ ತಿರಿಗಿಕೊಂಡನು ಮತ್ತು ಕುಳಿತುಕೊಂಡನು. 2ಆಗ ಅವನು ಪಟ್ಟಣದ ಹಿರಿಯರಲ್ಲಿ ಹತ್ತು ಮಂದಿಯನ್ನು ಕರೆದುಕೊಂಡನು ಮತ್ತು “ಇಲ್ಲಿ ಕುಳಿತುಕೊಳ್ಳಿರಿ” ಅಂದನು. ಆದ್ದರಿಂದ ಅವರು ಕುಳಿತುಕೊಂಡರು. 3ಆಗ ಅವನು ಆ ಬಂಧುವಾಗಿರುವ ವಿಮೋಚಕನಿಗೆ ಹೇಳಿದ್ದೇನಂದರೆ, “ಮೋವಾಬಿನ ಸೀಮೆಗಳಿಂದ ಹಿಂದಿರುಗಿ ಬಂದಿರುವ ಸ್ತ್ರೀಯಾದ ನವೊಮಿಯು ನಮ್ಮ ಸಹೋದರನಾದ ಎಲೀಮೆಲೆಕನಿಗೆ ಸೇರಿರುವಂಥ ಹೊಲದ ಭಾಗವನ್ನು ಮಾರಬೇಕೆಂದಿದ್ದಾಳೆ. 4ಈಗ ನಾನಾದರೋ, ನಾನು ನಿನ್ನ ಕಿವಿಯನ್ನು ತೆರೆಯಬೇಕು ಎಂದು ನಾನು ಹೇಳಿ, ಹೇಳಿದ್ದೇನೆಂದರೆ, ಇಲ್ಲಿ ಕುಳಿತಿರುವವರ ಉಪಸ್ಥಿತಿಯಲ್ಲಿ ಮತ್ತು ನನ್ನ ಜನರ ಹಿರಿಯರ ಉಪಸ್ಥಿತಿಯಲ್ಲಿ ‘ಅದನ್ನು ಕೊಂಡುಕೋ.’ ನೀನು ಅದನ್ನು ವಿಮೋಚಿಸುವುದಾದರೆ, ಅದನ್ನು ವಿಮೋಚಿಸು ಆದರೆ ನೀನು ಅದನ್ನು ವಿಮೋಚಿಸುವುದು ಇಲ್ಲವಾದರೆ, ಆಗ ನಾನು ತಿಳಿದುಕೊಳ್ಳುವಂತೆ ನನಗೆ ಹೇಳು, ಏಕೆಂದರೆ ನಿನ್ನ ಹೊರತು ಅದನ್ನು ವಿಮೋಚಿಸುವವರು ಯಾರೂ ಇಲ್ಲ ಮತ್ತು ನಿನ್ನ ತರುವಾಯ ನಾನು.” ಆಗ ಅವನು, “ನಾನೇ ಅದನ್ನು ವಿಮೋಚಿಸುವೆನು” ಅಂದನು. 5ಆಗ ಬೋವಜನು, “ನೀನು ನವೊಮಿಯ ಕೈಯಿಂದ ಹೊಲವನ್ನು ಕೊಂಡುಕೊಳ್ಳುವ ದಿನದಲ್ಲಿ, ಸತ್ತವನ ಹೆಸರನ್ನು ಅವನ ಆಸ್ತಿಯ ಮೇಲೆ ಎತ್ತುವ ಸಲುವಾಗಿ ಸತ್ತ ಮನುಷ್ಯನ ಹೆಂಡತಿಯಾದ ಮೋವಾಬ್ಯ ಸ್ತ್ರೀಯಾದ ರೂತಳನ್ನು ಸಹ ನೀನು ಪಡೆದುಕೊಳ್ಳುವಿ” ಅಂದನು. 6ಆಗ ಬಂಧುವಾಗಿರುವ ವಿಮೋಚಕನು, “ನನ್ನ ಸ್ವಂತ ಆಸ್ತಿಯನ್ನು ನಷ್ಟಪಡಿಸಿಕೊಳ್ಳದೆ ನನಗಾಗಿ ಅದನ್ನು ವಿಮೋಚಿಸಿಕೊಳ್ಳಲು ನನ್ನಿಂದ ಆಗುವುದಿಲ್ಲ. ನನ್ನ ವಿಮೋಚನೆಯ ಹಕ್ಕನ್ನು ನೀನು ನಿನಗಾಗಿ ವಿಮೋಚಿಸಿಕೋ, ಏಕೆಂದರೆ ಅದನ್ನು ವಿಮೋಚಿಸಿಕೊಳ್ಳಲು ನನ್ನಿಂದ ಆಗುವುದಿಲ್ಲ” ಅಂದನು.
7ಈಗ, ಇಸ್ರಾಯೇಲ್ಯರಲ್ಲಿ ಪೂರ್ವ ಕಾಲಗಳಲ್ಲಿ, ವಿಮೋಚನೆಯ ವಿಷಯದಲ್ಲಿ ಮತ್ತು ವಸ್ತುಗಳ ವಿನಿಮಯದ ವಿಷಯದಲ್ಲಿ ಯಾವುದಾದರೊಂದು ವಿಷಯವನ್ನು ಈ ರೀತಿಯಾಗಿ ದೃಢಪಡಿಸಿಕೊಳ್ಳುತ್ತಿದ್ದರು: ಮನುಷ್ಯನು ತನ್ನ ಪಾದರಕ್ಷೆಯನ್ನು ಬಿಚ್ಚಿ ಮತ್ತು ಅದನ್ನು ತನ್ನ ಸ್ನೇಹಿತನಿಗೆ ಕೊಡುತ್ತಿದ್ದನು. ಆದ್ದರಿಂದ ಇದು ಇಸ್ರಾಯೇಲ್ಯರಲ್ಲಿ ನ್ಯಾಯಸಮ್ಮತ ಒಪ್ಪಂದದ ರೀತಿಯಾಗಿತ್ತು. 8ಆದ್ದರಿಂದ ಬಂಧುವಾಗಿರುವ ವಿಮೋಚಕನು ಬೋವಜನಿಗೆ, “ನಿನಗಾಗಿ ಅದನ್ನು ಕೊಂಡುಕೋ” ಅಂದನು ಮತ್ತು ಅವನು ತನ್ನ ಪಾದರಕ್ಷೆಯನ್ನು ತೆಗೆದುಹಾಕಿದನು.
9ಆಗ ಬೋವಜನು ಹಿರಿಯರಿಗೆ ಮತ್ತು ಎಲ್ಲಾ ಜನರಿಗೆ ಹೇಳಿದ್ದೇನಂದರೆ, “ಎಲೀಮೆಲೆಕನಿಗೆ ಸೇರಿದ ಎಲ್ಲವನ್ನು ಮತ್ತು ಕಿಲ್ಯೋನ್ ಮತ್ತು ಮಹ್ಲೋನನಿಗೆ ಸೇರಿದ ಎಲ್ಲವನ್ನು ನವೊಮಿಯ ಕೈಯಿಂದ ನಾನು ಕೊಂಡುಕೊಳ್ಳುತ್ತಿದ್ದೇನೆ ಎಂಬುದಕ್ಕೆ ಇವತ್ತು ನೀವೇ ಸಾಕ್ಷಿಗಳು ಆಗಿದ್ದೀರಿ. 10ಮತ್ತು ಸತ್ತವನ ಹೆಸರನ್ನು ಅವನ ಆಸ್ತಿಯ ಮೇಲೆ ಎತ್ತುವ ಸಲುವಾಗಿ, ಮಹ್ಲೋನನ ವಿಧವೆಯಾದ ಮೋವಾಬ್ಯ ಸ್ತ್ರೀಯಾದ ರೂತಳನ್ನು ಸಹ ನಾನು ನನ್ನ ಹೆಂಡತಿಯನ್ನಾಗಿ ತೆಗೆದುಕೊಳ್ಳುತ್ತಿದ್ದೇನೆ, ಆದ್ದರಿಂದ ಸತ್ತವನ ಹೆಸರು ಅವನ ಸಹೋದರರ ಮಧ್ಯೆಯಿಂದಲೂ ಮತ್ತು ಅವನ ಬಾಗಿಲಿನ ಸ್ಥಳದಿಂದಲೂ ಕಡಿದು ಹಾಕಲ್ಪಡುವುದು ಇಲ್ಲ. ಇವತ್ತು ನೀವೇ ಸಾಕ್ಷಿಗಳು ಆಗಿದ್ದೀರಿ.” 11ಮತ್ತು ಬಾಗಿಲಿನ ಬಳಿಯಲ್ಲಿ ಇದ್ದಂಥ ಎಲ್ಲಾ ಜನರು ಮತ್ತು ಹಿರಿಯರು ಹೇಳಿದ್ದೇನಂದರೆ, “ನಾವೇ ಸಾಕ್ಷಿಗಳು ಆಗಿದ್ದೇವೆ. ಯೆಹೋವನು ಇಸ್ರಾಯೇಲನ ಮನೆಯನ್ನು ಕಟ್ಟಿದಂಥ ರಾಹೇಲಳು ಮತ್ತು ಲೇಯಾಳು ಎಂಬ ಇಬ್ಬರ ಹಾಗೆ ನಿನ್ನ ಮನೆಗೆ ಬರುವಂಥ ಈ ಸ್ತ್ರೀಯನ್ನು ಮಾಡಲಿ. ಎಫ್ರಾತದಲ್ಲಿ ಘನತೆಯನ್ನು ಗಳಿಸಿಕೋ, ಮತ್ತು ಬೇತ್ಲೆಹೇಮಿನಲ್ಲಿ ಪ್ರಸಿದ್ಧನಾಗಿರು. 12ಮತ್ತು ಯೆಹೋವನು ಈ ಸ್ತ್ರೀಯ ಮೂಲಕ ನಿನಗೆ ಕೊಡುವಂಥ ಸಂತಾನದಿಂದ ನಿನ್ನ ಮನೆಯು ಯೆಹೂದನಿಗೆ ತಾಮಾರಳು ಹೆತ್ತಂಥ ಪೆರೆಚನ ಮನೆಯ ಹಾಗೆ ಆಗಲಿ.”
13ಆದ್ದರಿಂದ ಬೋವಜನು ರೂತಳನ್ನು ತೆಗೆದುಕೊಂಡನು ಮತ್ತು ಆಕೆಯು ಅವನ ಹೆಂಡತಿ ಆದಳು, ಮತ್ತು ಅವನು ಆಕೆಯ ಬಳಿಗೆ ಹೋದನು. ಆಗ ಯೆಹೋವನು ಆಕೆಗೆ ಗರ್ಭಧಾರಣೆಯನ್ನು ಕೊಟ್ಟನು, ಮತ್ತು ಆಕೆಯು ಮಗನನ್ನು ಹೆತ್ತಳು. 14ಆಗ ಹೆಂಗಸರು ನವೊಮಿಗೆ ಹೇಳಿದ್ದೇನಂದರೆ, “ಇವತ್ತು ನಿನ್ನನ್ನು ಬಂಧುವಾಗಿರುವ ವಿಮೋಚಕನು ಇಲ್ಲದಂತೆ ಬಿಡದಿರುವಂಥ ಯೆಹೋವನು ಹರಸಲ್ಪಡಲಿ. ಅವನ ಹೆಸರು ಇಸ್ರಾಯೇಲ್ಯರಲ್ಲಿ ಪ್ರಖಾತ್ಯವಾಗಲಿ! 15ಈಗ ಅವನು ನಿನಗೆ ಜೀವವನ್ನು ಪುನಃಸ್ಥಾಪಿಸುವವನು ಮತ್ತು ನಿನ್ನ ವೃದ್ಧಾಪ್ಯದ ಪೋಷಕನು ಆಗಿರಲಿ. ಏಕೆಂದರೆ ನಿನ್ನನ್ನು ಪ್ರೀತಿಸುವಂಥ ನಿನ್ನ ಸೊಸೆಯು ಇವನನ್ನು ಹೆತ್ತಳಲ್ಲಾ, ಆಕೆಯು ನಿನಗೆ ಏಳು ಪುತ್ರರಿಗಿಂತಲೂ ಉತ್ತಮಳಾಗಿದ್ದಾಳೆ.”
16ಮತ್ತು ನವೊಮಿಯು ಮಗುವನ್ನು ಎತ್ತಿಕೊಂಡಳು ಮತ್ತು ಆಕೆಯ ಮಡಿಲಲ್ಲಿ ಇಟ್ಟುಕೊಂಡಳು, ಮತ್ತು ಅವಳು ಅವನ ದಾದಿ ಆದಳು. 17ಆದ್ದರಿಂದ ನೆರೆಹೊರೆಯ ಹೆಂಗಸರು, “ನವೊಮಿಗೆ ಮಗನು ಹುಟ್ಟಿದ್ದಾನೆ” ಎಂದು ಹೇಳಿ ಅವನಿಗೆ ಹೆಸರನ್ನು ಕರೆದರು. ಮತ್ತು ಅವರು ಅವನ ಹೆಸರನ್ನು ಓಬೇದ ಎಂದು ಕರೆದರು. ಅವನು ಇಷಯನ ತಂದೆಯೂ, ದಾವೀದನ ತಂದೆಯೂ ಆದನು.
18ಈಗ ಇವೇ ಪೆರೆಚನ ವಂಶಾವಳಿಗಳು ಆಗಿವೆ: ಪೆರೆಚನು ಹೆಚ್ರೋನನ ತಂದೆಯಾದನು; 19ಮತ್ತು ಹೆಚ್ರೋನನು ರಾಮನ ತಂದೆಯಾದನು; ಮತ್ತು ರಾಮನು ಅಮ್ಮೀನಾದಾಬನ ತಂದೆಯಾದನು; 20ಮತ್ತು ಅಮ್ಮೀನಾದಾಬನು ನಹಶೋನನ ತಂದೆಯಾದನು; ಮತ್ತು ನಹಶೋನನು ಸಲ್ಮೋನನ ತಂದೆಯಾದನು; 21ಮತ್ತು ಸಲ್ಮೋನನು ಬೋವಜನ ತಂದೆಯಾದನು; ಮತ್ತು ಬೋವಜನು ಓಬೇದನ ತಂದೆಯಾದನು; 22ಮತ್ತು ಓಬೇದನು ಇಷಯನ ತಂದೆಯಾದನು; ಮತ್ತು ಇಷಯನು ದಾವೀದನ ತಂದೆಯಾದನು.